ಬದಲಿ ಪ್ರತಿನಿಧಿಯ ದೀಕ್ಷಾಸ್ನಾನದ ಮತ್ತು ದೃಢೀಕರಣದ ಬಗ್ಗೆ

ಬದಲಿ ಪ್ರತಿನಿಧಿಯ ದೀಕ್ಷಾಸ್ನಾನವು ಎಂದರೇನು?

ದೀಕ್ಷಾಸ್ನಾನ ಮತ್ತು ದೃಢೀಕರಣ ಅತ್ಯಗತ್ಯ

ನಾಲ್ಕನೇ ನಂಬಿಕೆಯ ಲೇಖನವು ಹೇಳುತ್ತದೆ ಯೇಸುಕ್ರಿಸ್ತನ ಸುವಾರ್ತೆಯ ಮೊದಲ ಆಜ್ಞೆವಿಧಿಗಳು "ಪಾಪಗಳ ಪರಿಹಾರಕ್ಕಾಗಿ ಮುಳುಗಿಸುವ ಮೂಲಕ ದೀಕ್ಷಾಸ್ನಾನ" ಹಾಗು "ಪವಿತ್ರಾತ್ಮನ ಉಡುಗೊರೆಗಾಗಿ ಹಸ್ತಗಳನ್ನು ಇಡುವುದು." ಯೇಸು ಅದನ್ನು ಕಲಿಸಿದನು ಆತನನ್ನು ಅನುಸರಿಸಲು ಮತ್ತು ಈ ಜೀವನದ ನಂತರ ನಮ್ಮ ಪರಲೋಕದ ತಂದೆಯ ಬಳಿಗೆ ಮರಳಲು ಬಯಸುವ ಎಲ್ಲರಿಗೂ ದೀಕ್ಷಾಸ್ನಾನದ ಮತ್ತು ದೃಢೀಕರಣದ ಅಗತ್ಯವಿದೆ. ದೀಕ್ಷಾಸ್ನಾನ ನಮ್ಮ ಪರಲೋಕದ ತಂದೆಯು ನಮಗೆ ನೀಡಲು ಬಯಸುವ ಎಲ್ಲಾ ಆಶೀರ್ವಾದಗಳನ್ನು ಸ್ವೀಕರಿಸಲು ಕಾರಣವಾಗುವ ಒಡಂಬಡಿಕೆಯ ಮಾರ್ಗದ ದ್ವಾರವಾಗಿದೆ. ನಾವು ಆತನ ಸುವಾರ್ತೆಯನ್ನು ಸಂಪೂರ್ಣವಾಗಿ ಸ್ವೀಕರಿಸಿದಂತೆ "ಕ್ರಿಸ್ತನಲ್ಲಿ ಪರಿಪೂರ್ಣರಾಗಲು" ಇದು ಮುಖ್ಯ ದ್ವಾರಆಗಿದೆ. ಮೊರೊನಿ 10, 32, 33)

ತನ್ನ ಸೇವೆಯ ಆರಂಭದಲ್ಲಿ, ಯೇಸು ಗಲಿಲಾಯದಿಂದ ಜುದೇಯಾದ ಜೋರ್ಡಾನ್ ನದಿಗೆ ಪ್ರಯಾಣಿಸಿದನು. ಸ್ನಾನಿಕನಾದ ಯೋಹಾನನು ಅಲ್ಲಿದ್ದನು, ಜನರಿಗೆ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನ ಆಗಲು ಕಲಿಸಿದನು. ಯೇಸುಕ್ರಿಸ್ತನನ್ನು ದೀಕ್ಷಾಸ್ನಾನ ಆಗಲು ಕೇಳಿಕೊಂಡರು, ಆದರೆ ಯೋಹಾನನಿಗೆ ಇಷ್ಟವಿರಲಿಲ್ಲ ಏಕೆಂದರೆ ಯೇಸು ಪಾಪರಹಿತ ಎಂದು ತಿಳಿದಿದ್ದನು. ಎಲ್ಲಾ ನೀತಿಯನ್ನು ನೆರವೇರಿಸಲು" ಮತ್ತು ನಮ್ಮ ಪರಲೋಕದ ತಂದೆಯ ಆಜ್ಞೆಗಳಿಗೆ ವಿಧೇಯರಾಗಲು ತಾನು ದೀಕ್ಷಾಸ್ನಾನ ಆಗಬೇಕೆಂದು ರಕ್ಷಕನು ವಿವರಿಸಿದನು. ( ಮತ್ತಾಯನು 3:15) ಆದ್ದರಿಂದ ಯೇಸು ಕ್ರಿಸ್ತನು ನೀರಿನಲ್ಲಿ ಪ್ರವೇಶಿಸಿದಾಗ ಮತ್ತು ಯೋಹಾನನು ಅವನಿಗೆ ದೀಕ್ಷಾಸ್ನಾನ ಮಾಡಿದಾಗ ನಮಗೆಲ್ಲರಿಗೂ ಮಾದರಿಯಾಯಾಗಿದಾರೆ.2 ನೆಫಿ 31:5). ಜೆಯೋಹಾನನು ಸಹ ಆ ಪವಿತ್ರ ಅನುಭವದ ವೈಯಕ್ತಿಕ ಸಾಕ್ಷಿಯನ್ನು ಪಡೆದನು.

"ಮತ್ತು ಯೇಸು, ಅವನು ದೀಕ್ಷಾಸ್ನಾನ ಪಡೆದಾಗ, ತಕ್ಷಣವೇ ನೀರಿನಿಂದ ಮೇಲಕ್ಕೆ ಬಂದನು: ಮತ್ತು, ಇಗೋ, ಪರಲೋಕವು ಅವನಿಗೆ ತೆರೆಯಲ್ಪಟ್ಟಿತು, ಮತ್ತು ದೇವರ ಆತ್ಮವು ಪಾರಿವಾಳದಂತೆ ಇಳಿದು ಅವನ ಮೇಲೆ ಬೆಳಗುತ್ತಿರುವುದನ್ನು ಆತನು ಕಂಡನು:

"ಮತ್ತು ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು" (ಮತ್ತಾಯನು 3:16–17).

 ಯೊರ್ದನ್ ಹೊಳೆಯಲಿ ಸ್ನಾನಿಕನಾದ ಯೋಹಾನನು ಹಾಗು ಯೇಸು
ಯೊರ್ದನ್ ಹೊಳೆಯಲಿ ಸ್ನಾನಿಕನಾದ ಯೋಹಾನನು ಹಾಗು ಯೇಸು.

ನಂತರ, ಯೆಹೂದ್ಯರ ಅಧಿಕಾರಿಯಾದ ನಿಕೊದೇಮನೆಂಬ ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದುನು. ಯೇಸು "ದೇವರ ಬಳಿಯಿಂದ ಬಂದ ಬೋಧಕನೆಂದು" ಎಂದು ಅವನು ಬಲ್ಲೆನು (ಯೋಹಾನ 3:2), ಮತ್ತು ಅವನು ಇನ್ನಷ್ಟು ತಿಳಿದುಕೊಳ್ಳಲು ಬಯಸಿದನು. ದೀಕ್ಷಾಸ್ನಾನ ಮತ್ತು ದೃಢೀಕರಣದ ಮೂಲಕ ಪವಿತ್ರಾತ್ಮವನ್ನು ಸ್ವೀಕರಿಸುವುದು ಮೋಕ್ಷಕ್ಕಾಗಿ ಅಗತ್ಯವಿದೆ ಎಂದು ಯೇಸು ಅವನಿಗೆ ಕಲಿಸಿದನು:

"ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು". (ಯೋಹಾನ 3:5).

ನೀರಿನಿಂದ ಹುಟ್ಟಿರುವುದು ದೀಕ್ಷಾಸ್ನಾನವನ್ನು ಸೂಚಿಸುತ್ತದೆ. ಆತ್ಮದಿಂದ ಹುಟ್ಟಿರುವುದು ದೃಢೀಕರಣದ ಮೂಲಕ ಪವಿತ್ರಾತ್ಮದ ಉಡುಗೊರೆಯನ್ನು (ಪವಿತ್ರಾತ್ಮ ಎಂದೂ ಕರೆಯುತ್ತಾರೆ) ಸ್ವೀಕರಿಸುವುದನ್ನು ಸೂಚಿಸುತ್ತದೆ. ಈ ಆಜ್ಞೆವಿಧಿಗಳು ಪವಿತ್ರವಾಗಿವೆ ಮತ್ತು ನಾವು ಅವುಗಳನ್ನು ಸ್ವೀಕರಿಸಿದಾಗ ನಾವು ದಿವ್ಯವಾದ ಒಡಂಬಡಿಕೆಗಳನ್ನು ಮಾಡುತ್ತೇವೆ. ನಾವು ಯೇಸುಕ್ರಿಸ್ತನ ಹೆಸರನ್ನು ನಮ್ಮ ಮೇಲೆ ತೆಗೆದುಕೊಳ್ಳಲು ಸಿದ್ಧರಿದ್ದೇವೆ, ಯಾವಾಗಲೂ ಆತನನ್ನು ಸ್ಮರಿಸುತ್ತೇವೆ ಮತ್ತು ದೇವರ ಆಜ್ಞೆಗಳನ್ನು ಪಾಲಿಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆ. ನಾವು ಈ ವಾಗ್ದಾನಗಳನ್ನು ಪಾಲಿಸುವಾಗ, ನಾವು ಯೇಸು ಕ್ರಿಸ್ತನಲ್ಲಿ ನಮ್ಮ ವಿಶ್ವಾಸವನ್ನು ಮತ್ತು ಆತನನ್ನು ಅನುಸರಿಸಲು ನಮ್ಮ ಇಚ್ಛೆಯನ್ನು ತೋರಿಸುತ್ತೇವೆ.

ಅವರ ಪುನರುತ್ಥಾನದ ನಂತರ, ರಕ್ಷಕನು ಮತ್ತೆ ದೀಕ್ಷಾಸ್ನಾನದ ಪ್ರಾಮುಖ್ಯತೆಯನ್ನು ಕಲಿಸಿದನು ಅವನು ತನ್ನ ಸುವಾರ್ತೆಯನ್ನು ಎಲ್ಲಾ ಜನರಿಗೆ ಬೋಧಿಸಲು ಅಪೊಸ್ತಲರನ್ನು ಕಳುಹಿಸಿದನು, "ನಂಬಿ ದೀಕ್ಷಾಸ್ನಾನ ಪಡೆದುಕೊಳ್ಳುವವನು ರಕ್ಷಣೆ ಹೊಂದುವನು" (ಮಾರ್ಕನು 16:16).

ಪ್ರವಾದಿ ಜೋಸೆಫ್ ಸ್ಮಿತ್ ಮೂಲಕ ರಕ್ಷಕನು ತನ್ನ ಸಭೆಯನ್ನು ಪುನಃಸ್ಥಾಪಿಸಿದಾಗ, ದೀಕ್ಷಾಸ್ನಾನ ಇನ್ನೂ ಅಗತ್ಯವಿದೆ ಎಂದು ಆತನು ಮತ್ತೆ ಕಲಿಸಿದನು ( ಸಿದ್ಧಾಂತ ಮತ್ತು ಒಪ್ಪಂದಗಳು 22:4). ಅವರು ದೀಕ್ಷಾಸ್ನಾನದ ಸರಿಯಾದ ವಿಧಾನವನ್ನು ಸಹ ಬಹಿರಂಗಪಡಿಸಿದರು. ದೀಕ್ಷಾಸ್ನಾನವನ್ನು ಮುಳುಗಿಸುವಿಕೆಯಿಂದ ಮತ್ತು ಸರಿಯಾದ ಯಾಜಕತ್ವದ ಅಧಿಕಾರದಿಂದ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು. (ಸಿದ್ಧಾಂತ ಮತ್ತು ಒಪ್ಪಂದಗಳು 20:73–74)

ದೇವರು ತನ್ನ ಎಲ್ಲಾ ಮಕ್ಕಳನ್ನು ಪ್ರೀತಿಸುತ್ತಾರೆ

ಪ್ರತಿಯೊಬ್ಬ ವ್ಯಕ್ತಿಯು ದೇವರ ಮಗು. ಎಲ್ಲರೂ ಆತನಿಗೆ ಅಮೂಲ್ಯರು. ಅವನು ಅವರನ್ನು ತಿಳಿದಿದ್ದಾನೆ ಮತ್ತು ಅವನು ಅವರನ್ನು ಪ್ರೀತಿಸುತ್ತಾನೆ. ಅವರು ಘೋಷಿಸಿದರು, "ಇಗೋ, ಇದು ನನ್ನ ಕೆಲಸ ಮತ್ತು ನನ್ನ ಮಹಿಮೆ - ಮನುಷ್ಯನ ಅಮರತ್ವ ಮತ್ತು ಶಾಶ್ವತ ಜೀವನವನ್ನು ಜಾರಿಗೆ ತರುವುದು" (ಮೋಸೆಸ್ 1:39). ಈ ಜೀವನದ ನಂತರ ಅವನ ಎಲ್ಲಾ ಮಕ್ಕಳಿಗೆ ಹಿಂತಿರುಗಲು ಅವನು ಒಂದು ಮಾರ್ಗವನ್ನು ಒದಗಿಸಿದ್ದಾನೆ. ಆ ದಾರಿ ಯೇಸು ಕ್ರಿಸ್ತನ ಸುವಾರ್ತೆಯಾಗಿದೆ.

ಅನೇಕ ಜನರು ಸುವಾರ್ತೆಯನ್ನು ಸ್ವೀಕರಿಸಲು ಮತ್ತು ಈ ಜೀವನದಲ್ಲಿ ದೀಕ್ಷಾಸ್ನಾನವನ್ನು ಪಡೆಯಲು ಅವಕಾಶವನ್ನು ಹೊಂದಿದ್ದಾರೆ. ಆದರೆ ದೀಕ್ಷಾಸ್ನಾನ ಪಡೆಯದೆ ಅಥವಾ ಯೇಸುವಿನ ಬಗ್ಗೆ ತಿಳಿಯದೆ ಸಾಯುವವರ ಬಗ್ಗೆ ಏನು? ಅವರನ್ನೂ ಹೇಗೆ ಉಳಿಸಬಹುದು? ದೇವರು ಅವರನ್ನು ಮರೆತಿಲ್ಲ!

ಮರಣವು ಜೀವನದ ಅಂತ್ಯವಲ್ಲ, ಬದಲಿಗೆ ದೇವರ ಕಡೆಗೆ ನಮ್ಮ ಪ್ರಯಾಣದ ಒಂದು ಹೆಜ್ಜೆ. ನಾವು ಸತ್ತಾಗ, ನಮ್ಮ ಆತ್ಮಗಳು ನಮ್ಮ ದೇಹವನ್ನು ತಾತ್ಕಾಲಿಕವಾಗಿ ಬಿಟ್ಟು ಹೋಗುವುದು. ನಾವು ಆತ್ಮ ಪ್ರಪಂಚವನ್ನು ಪ್ರವೇಶಿಸುತ್ತೇವೆ ಮತ್ತು ಕುಟುಂಬ ಸದಸ್ಯರು ಮತ್ತು ನಿಧನರಾದ ಇತರರನ್ನು ಸೇರುತ್ತೇವೆ. ಅಲ್ಲಿ ನಾವು ಪುನರುತ್ಥಾನಗೊಳ್ಳುವ ಆ ಅದ್ಭುತ ದಿನಕ್ಕಾಗಿ ತಯಾರಿ ಆಗುತ್ತೇವೆ ಮತ್ತು ನಮ್ಮ ಆತ್ಮಗಳು ಪರಿಪೂರ್ಣ ದೇಹಗಳೊಂದಿಗೆ ಮತ್ತೆ ಒಂದಾಗುತ್ತವೆ. ಆಗ ನಾವು ಅನಾರೋಗ್ಯ, ರೋಗ, ಮತ್ತು ನಾವು ಈಗ ಅನುಭವಿಸುತ್ತಿರುವ ಎಲ್ಲಾ ಅಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳಿಂದ ಮುಕ್ತರಾಗುತ್ತೇವೆ. ಆತ್ಮ ಜಗತ್ತಿನಲ್ಲಿ, ಈ ಜೀವನದಲ್ಲಿ ಸುವಾರ್ತೆಯ ಬಗ್ಗೆ ಕಲಿಯಲು ಅವಕಾಶವಿಲ್ಲದೆ ಮರಣ ಹೊಂದಿದವರಿಗೆ ರಕ್ಷಕನ ಮತ್ತು ಮೋಕ್ಷದ ಯೋಜನೆಯ ಬಗ್ಗೆ ಕಲಿಸಲಾಗುತ್ತದೆ. (1 ಪೇತ್ರನು 3:18–20; ಸಿದ್ಧಾಂತ ಮತ್ತು ಒಪ್ಪಂದಗಳು 138:16–19). ಟಿನಂತರ ಅವರು ಸುವಾರ್ತೆಯನ್ನು ಸ್ವೀಕರಿಸಲು ಮತ್ತು ಪಶ್ಚಾತ್ತಾಪಪಡಲು ಆಯ್ಕೆ ಮಾಡಬಹುದು.ಬಿ ಆದರೆ ಅವರು ಅಲ್ಲಿ ದೀಕ್ಷಾಸ್ನಾನ ಮಾಡಲಾಗುವುದಿಲ್ಲ ಏಕೆಂದರೆ ಅವರು ತಮ್ಮ ದೈಹಿಕ ದೇಹಗಳನ್ನು ಹೊಂದಿಲ್ಲ. ಎ ದಯಾಪರ ಪರಲೋಕದ ತಂದೆಯು ಅವರಿಗೆ ದೀಕ್ಷಾಸ್ನಾನ ಪಡೆಯಲು ಇನ್ನೊಂದು ಮಾರ್ಗವನ್ನು ಒದಗಿಸಿದ್ದಾರೆ.

ಪವಿತ್ರಾಲಯದಲ್ಲಿ, ನಾವು ಆ ಅವಕಾಶವಿಲ್ಲದೆ ಮೃತಪಟ್ಟವರಿಗೆ ದೀಕ್ಷಾಸ್ನಾನ ಕೊಡಬಹುದು ಮತ್ತು ದೃಢೀಕರಿಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಅವರನ್ನು ಪ್ರತಿನಿಧಿಸಬಹುದು ಮತ್ತು ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸಬಹುದು. ಇತರರಿಗಾಗಿ ನಡೆಸಲಾದ ಆಜ್ಞೆವಿಧಿಗಳನ್ನು ಬದಲಿ ಪ್ರತಿನಿಧಿಯ ಆಜ್ಞೆವಿಧಿಗಳು (ಅಥವಾ ಇತರರ ಪರವಾಗಿ ಮಾಡುವ ಆಜ್ಞೆವಿಧಿಗಳು ಎಂದು ಕರೆಯಲಾಗುತ್ತದೆ} ಯೇಸುಕ್ರಿಸ್ತನ ಪ್ರಾಯಶ್ಚಿತ್ತದ ಮೂಲಕ ಎಲ್ಲಾ ಜನರು ಪುನರುತ್ಥಾನಗೊಳ್ಳುವ ಕಾರಣ ಮೃತಪಟ್ಟವರಿಗೆ ದೀಕ್ಷಾಸ್ನಾನವನ್ನು ಅಭ್ಯಾಸಮಾಡಲಾಗುತ್ತದೆ ಎಂದು ಧರ್ಮಪ್ರಚಾರಕ ಪೌಲನು ಕೊರಿಂಥದವರಿಗೆ ಕಲಿಸಿದನು. (1 ಕೊರಿಂಥದವರಿಗೆ 15:29, 55–57).

ಇತರರ ಪರವಾಗಿ ಮಾಡುವ ಆಜ್ಞೆವಿಧಿಗಳ ಸಿದ್ಧಾಂತವು ಯಾವಾಗಲೂ ಯೇಸುಕ್ರಿಸ್ತನ ಸುವಾರ್ತೆಯ ಭಾಗವಾಗಿದೆ. ವಾಸ್ತವವಾಗಿ, ಅವನ ಪ್ರಾಯಶ್ಚಿತ್ತವು ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಇತರರ ಪರವಾಗಿ ಮಾಡುವ ಕ್ರಿಯೆಯಾಗಿದೆ. ಅವರ ತ್ಯಾಗದ ಮೂಲಕ, ನಾವು ನಮಗಾಗಿ ಮಾಡಲಾಗದಿದ್ದನ್ನು ಅವರು ಎಲ್ಲಾ ಜನರಿಗೆ ಮಾಡಿದರು. ಅವರಿಂದಾಗಿ, ಎಲ್ಲಾ ಜನರು ಪುನರುತ್ಥಾನಗೊಳ್ಳುವರು. ಎಲ್ಲರೂ ಸುವಾರ್ತೆಯನ್ನು ಕೇಳುತ್ತಾರೆ ಮತ್ತು ನಮ್ಮ ಪರಲೋಕದ ಪೋಷಕರ ಬಳಿಗೆ ಹಿಂತಿರುಗಲು ಎಲ್ಲರಿಗೂ ಅವಕಾಶವಿದೆ.

ಮೃತಪಟ್ಟವರಿಗೆ ಮಾಡಲಾದ ಪವಿತ್ರಾಲಯದ ದೀಕ್ಷಾಸ್ನಾನ ಮತ್ತು ದೃಢೀಕರಣಗಳು ಪ್ರೀತಿಯಲ್ಲಿ ನೀಡಲಾಗುವ ಉಡುಗೊರೆಗಳಾಗಿವೆ. ಮತ್ತು ಮರಣದ ನಂತರ ಜೀವನವು ಮುಂದುವರಿಯುತ್ತದೆ ಎಂದು ನಾವು ನಂಬುವ ಕಾರಣ, ಮರಣ ಹೊಂದಿದವರು ಆಜ್ಞೆವಿಧಿಗಳ ಬಗ್ಗೆ ತಿಳಿದಿದ್ದಾರೆ ಎಂದು ನಾವು ನಂಬುತ್ತೇವೆ. ನಂತರ ಅವುಗಳನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಅವರು ಆಯ್ಕೆ ಮಾಡಬಹುದು.

ದೀಕ್ಷಾಸ್ನಾನದ ಕೊಳ (ಓಗ್ಡೆನ್ ಯುಟಾ ಪವಿತ್ರಾಲಯ)
ದೀಕ್ಷಾಸ್ನಾನದ ಕೊಳ (ಓಗ್ಡೆನ್ ಯುಟಾ ಪವಿತ್ರಾಲಯ)

ನೀವು ಪವಿತ್ರಾಲಯದಲ್ಲಿ ಇತರರಿಗೆ ಸೇವೆ ಸಲ್ಲಿಸಬಹುದು

ಪ್ರತಿಯೊಂದು ಪವಿತ್ರಾಲಯವು ದೊಡ್ಡ ದೀಕ್ಷಾಸ್ನಾನದ ಕೊಳನೊಂದಿಗೆ ದೀಕ್ಷಾಸ್ನಾನದ ಕೋಣೆ ಹೊಂದಿದೆ. ಇಸ್ರಾಯೇಲನ ಹನ್ನೆರಡು ಕುಲಗಳನ್ನು ಪ್ರತಿನಿಧಿಸುವ ಹನ್ನೆರಡು ಎತ್ತುಗಳ ಪ್ರತಿಮೆಗಳ ಹಿಂಭಾಗದಲ್ಲಿ ಕೊಳ ನಿಂತಿದೆ. ಇದು ಹಳೆಯ ಒಡಂಬಡಿಕೆಯಲ್ಲಿ ಸೊಲೊಮೋನನ ಪವಿತ್ರಾಲಯದ ಹಿಂದಿನ ಸಂಪ್ರದಾಯವನ್ನು ಅನುಸರಿಸುತ್ತದೆ ( 2 ಪೂರ್ವಕಾಲವೃತ್ತಾ 4:2–4 ನೋಡಿ). ಎತ್ತುಗಳು ಯೇಸುಕ್ರಿಸ್ತನ ಸುವಾರ್ತೆಯ ಬಲ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತವೆ.

ವರ್ಷ ಆರಂಭದ ಜನವರಿಯಲ್ಲಿ 12 ನೇ ವರ್ಷಕ್ಕೆ ಕಾಲಿಡುವಾಗ ಸಭೆಯ ನಿಷ್ಠಾವಂತ ಸದಸ್ಯರು ದೀಕ್ಷಾಸ್ನಾನ ಮತ್ತು ದೃಢೀಕರಣಗಳನ್ನು ನಿರ್ವಹಿಸಲು ಪವಿತ್ರಾಲಯದ ಶಿಫಾರಸುನ್ನು ಪಡೆಯಬಹುದು. ಪವಿತ್ರಾಲಯದ ಶಿಫಾರಸನ್ನು ಸ್ವೀಕರಿಸಲು, ನಿಮ್ಮ ಬಿಷಪ್ ಅಥವಾ ಶಾಖೆಯ ಅಧ್ಯಕ್ಷರೊಂದಿಗೆ "ಪವಿತ್ರಾಲಯದ ಶಿಫಾರಸು ಸಂದರ್ಶನ" ಅನ್ನು ನಿಗದಿಪಡಿಸಿ. ನಂತರ ನೀವು ಮೃತಪಟ್ಟವರಿಗೆ ದೀಕ್ಷಾಸ್ನಾನ ಮತ್ತು ದೃಢೀಕರಿಸಲು ಪವಿತ್ರಾಲಯಕ್ಕೆ ಹೋಗಬಹುದು.

ನಿಮ್ಮ ಸ್ವಂತ ದೀಕ್ಷಾಸ್ನಾನ ನಂತೆಯೇ, ನೀವು ಗುಪ್ತ ಉಡುಪನ್ನು ಬದಲಾಯಿಸುವ ಪ್ರದೇಶವನ್ನು ಹೊಂದಿರುತ್ತೀರಿ, ಅಲ್ಲಿ ನೀವು ಮೃತಪಟ್ಟವರಿಗೆ ದೀಕ್ಷಾಸ್ನಾನ ಮಾಡಲು ಬಿಳಿ ಬಟ್ಟೆಯನ್ನು ಬದಲಾಯಿಸುತ್ತೀರಿ. ದೀಕ್ಷಾಸ್ನಾನದ ನಂತರ, ನೀವು ನಿಮ್ಮ ಉಡುಪನ್ನು ಬದಲಾಯಿಸುವ ಪ್ರದೇಶಕ್ಕೆ ಹಿಂತಿರುಗುತ್ತೀರಿ ಮತ್ತು ಒಣ ಬಟ್ಟೆಯನ್ನು ಬದಲಾಯಿಸುತ್ತೀರಿ. ನಂತರ ನೀವು ದೀಕ್ಷಾಸ್ನಾನದ ಕೋಣೆಯಲ್ಲಿರುವ ಪ್ರತ್ಯೇಕ ದೃಢೀಕರಣದ ಕೋಣೆಗೆ ಹೋಗುತ್ತೀರಿ. ಯಾಜಕತ್ವ ಹೊಂದಿರುವವರು ನಿಮ್ಮ ಶಿರದ ಮೇಲೆ ಕೈಯಿಟ್ಟು ಮೃತಪಟ್ಟವರಿಗೆ ಪವಿತ್ರಾತ್ಮದ ಉಡುಗೊರೆಯನ್ನು ನೀಡುತ್ತಾರೆ. ಈ ಆಜ್ಞೆವಿಧಿಗಳನ್ನು ಮಾಡಿದ ನಂತರ, ಅವರು ಅವುಗಳನ್ನು ಸ್ವೀಕರಿಸಲು ಬಯಸಿದರೆ ಅವರು ನಿರ್ಧರಿಸಬಹುದು. ಬದಲಿ ಪ್ರತಿನಿಧಿಯ ದೀಕ್ಷಾಸ್ನಾನ, ಮತ್ತು ದೃಢೀಕರಣಗಳನ್ನು ಪವಿತ್ರಾಲಯಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ದೃಢೀಕರಣ ಕೊಠಡಿ (ಮೆರಿಡಿಯನ್  ಐಡಾಹೊ ಪವಿತ್ರಾಲಯ)
ದೃಢೀಕರಣ ಕೊಠಡಿ (ಮೆರಿಡಿಯನ್ ಐಡಾಹೊ ಪವಿತ್ರಾಲಯ)

ಪವಿತ್ರಾಲಯದಲ್ಲಿ, ಮೃತಪಟ್ಟ ನಿಮ್ಮ ಸ್ವಂತ ಕುಟುಂಬದ ಸದಸ್ಯರಿಗೆ ದೀಕ್ಷಾಸ್ನಾನ ಕೊಡುವ ವಿಶೇಷ ಅವಕಾಶವನ್ನು ಸಹ ನೀವು ಪಡೆಯಬಹುದು. ನಿಮ್ಮ ಕುಟುಂಬದ ಇತಿಹಾಸವನ್ನು ನೀವು ಸಂಶೋಧಿಸಿದಾಗ, ನಿಮ್ಮ ಪೂರ್ವಜರನ್ನು ನೀವು ಕಂಡುಕೊಳ್ಳುತ್ತೀರಿ. ಪವಿತ್ರಾಲಯಕ್ಕೆ ಹೋಗುವುದು ಮತ್ತು ಅವರಿಗಾಗಿಗೆ ದೀಕ್ಷಾಸ್ನಾನವು ಮತ್ತು ದೃಢೀಕರಣವು ಕೊಡುವುದು ಅದ್ಭುತ ಮತ್ತು ವೈಯಕ್ತಿಕ ಅನುಭವವಾಗಿದೆ.

ನೀವು ಪೋಷಕರಿಗೆ, ಅಜ್ಜ ಅಜ್ಜಿಯರಿಗೆ, ಒಡಹುಟ್ಟಿದವರಿಗೆ, ಚಿಕ್ಕಮ್ಮ, ಚಿಕ್ಕಪ್ಪ, ಸೋದರಸಂಬಂಧಿಗಳು ಮತ್ತು ಇತರರಿಗೆ ಈ ಸೇವೆಯನ್ನು ಒದಗಿಸಬಹುದು. ಈ ದಯೆಯ ಕ್ರಿಯೆ ಕುಟುಂಬಗಳನ್ನು ಬಲಪಡಿಸಬಹುದು. ನೀವು ನಿಮ್ಮ ಕುಟುಂಬದೊಂದಿಗೆ ಆಳವಾದ ಸಂಪರ್ಕವನ್ನು ಅನುಭವಿಸಬಹುದು ಮತ್ತು ದೇವರಿಗೆ ಹತ್ತಿರವಾಗಬಹುದು. ಸೇರಿರುವ ಈ ಭಾವವು ನಿಮಗೆ ಶಕ್ತಿ, ನಿರ್ದೇಶನ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ನಿಮ್ಮನ್ನು ಆಶೀರ್ವದಿಸುತ್ತದೆ. ನೀವು ನಿಮ್ಮ ಪೂರ್ವಜರನ್ನು ಹುಡುಕುವ ಮತ್ತು ಸೇವೆ ಮಾಡುವಾಗ ನಿಮ್ಮ ಸ್ವಂತ ಜೀವನಕ್ಕೆ ಶಾಂತಿ ಮತ್ತು ಒಳನೋಟವನ್ನು ನೀವು ಕಾಣಬಹುದು. ಅವರು ತಮಗಾಗಿ ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ನೀವು ಇತರರಿಗಾಗಿ ಮಾಡುವಂತೆಯೇ ನೀವು ರಕ್ಷಕನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ ಮತ್ತು ತಿಳಿಯುವಿರಿ.

ನಿಮಗಾಗಿ ವಿಶೇಷ ವಾಗ್ದಾನ

ಹಿರಿಯ ಡೇವಿಡ್ ಎ. ಬೆಡ್ನರ್ ಹೇಳಿದರು: “ನಾನು ನಿಮ್ಮನ್ನು ಅಧ್ಯಯನ ಮಾಡಲು, ನಿಮ್ಮ ಪೂರ್ವಜರನ್ನು ಹುಡುಕಲು ಮತ್ತು ನಿಮ್ಮ ಸಂಬಂಧಿಕರಿಗಾಗಿ ಯೆಹೋವನ ಆಲಯದಲ್ಲಿ ಬದಲಿ ಪ್ರತಿನಿಧಿಯ ದೀಕ್ಷಾಸ್ನಾನಗಳನ್ನು ಮಾಡಲು ನಿಮ್ಮನ್ನು ಸಿದ್ಧಪಡಿಸಲು ಪ್ರೋತ್ಸಾಹಿಸುತ್ತೇನೆ. ... ಈ ಆಹ್ವಾನಕ್ಕೆ ನೀವು ವಿಶ್ವಸದಿಂದ ಪ್ರತಿಕ್ರಿಯಿಸುವಾಗ, ನಿಮ್ಮ ಹೃದಯಗಳು ಪಿತೃಗಳ ಕಡೆಗೆ ತಿರುಗುತ್ತವೆ. ಅಬ್ರಹಾಂ, ಇಸಾಕ್ ಮತ್ತು ಯಾಕೋಬರಿಗೆ ಮಾಡಿದ ವಾಗ್ದಾನಗಳು ನಿಮ್ಮ ಹೃದಯದಲ್ಲಿ ಅಳವಡಿಸಲ್ಪಡುತ್ತವೆ. ನಿಮ್ಮ ಪೂರ್ವಜರ ಬಗ್ಗೆ ನಿಮ್ಮ ಪ್ರೀತಿ ಮತ್ತು ಕೃತಜ್ಞತೆ ಹೆಚ್ಚಾಗುತ್ತದೆ. ರಕ್ಷಕನ ನಿಮ್ಮ ಸಾಕ್ಷಿ ಮತ್ತು ಪರಿವರ್ತನೆಯು ಆಳವಾಗಿ ಮತ್ತು ಸ್ಥಿರವಾಗಿರುತ್ತದೆ. ಮತ್ತು ಎದುರಾಳಿಯ ತೀವ್ರತರವಾದ ಪ್ರಭಾವದಿಂದ ನಿಮ್ಮನ್ನು ರಕ್ಷಿಸಲಾಗುವುದು ಎಂದು ನಾನು ವಾಗ್ದಾನ ನೀಡುತ್ತೇನೆ. ನೀವು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಮತ್ತು ಪ್ರೀತಿಸುವಂತೆ, ನಿಮ್ಮ ಜೀವನದುದ್ದಕ್ಕೂ ನೀವು ರಕ್ಷಿಸಲ್ಪಡುತ್ತೀರಿ" (“ಮಕ್ಕಳ ಹೃದಯವು ತಿರುಗುತ್ತದೆ,” ಎನ್ಸಿನ್ ಅಥವಾ ಲಿಯಾಹೋನಾ, ನವೆಂಬರ್. 2011, 26–27).}